DOWNLOAD OUR APP
IndiaOnline playstore
02:44 AM | Sun, 26 Jun 2016

Download Our Mobile App

Download Font

ವಿದರ್ಭ ವನ್ಯಜೀವಿ ಅಭಯಾರಣ್ಯದಲ್ಲಿ ಸಚಿನ್!

124 Days ago
| by Kannada Prabha

sachin

ನಾಗ್ಪುರ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿರುವ ವನ್ಯಜೀವಿ ಅಭಯಾರಣ್ಯಕ್ಕೆ ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ಕುಟುಂಬ ಸದಸ್ಯರೊಂದಿಗೆ ವಾರಾಂತ್ಯ ರಜೆ ನಿಮಿತ್ತ ಭೇಟಿ ನೀಡಿದರು.

ಸಚಿನ್ ತಮ್ಮ ಟ್ವಿಟರ್ ನಲ್ಲಿ ಅರಣ್ಯದಲ್ಲಿ ಟಿ-ಶರ್ಟ್ ಹಾಗೂ ಜೀನ್ಸ್ ಧರಿಸಿದ್ದ ಫೋಟೋ ಹಾಕಿ ನಾನು ಎಲ್ಲಿದ್ದೇನೆ ಊಹಿಸಿ ಎಂದು ಪ್ರಕಟಿಸಿದ್ದರು. ನಾಗ್ಪುರ ಬಳಿಯಿರುವ ಉಮ್ರೆಡ್ ಕಾರ್​ಹಾಂಡ್ಲಾ ವನ್ಯಜೀವಿ ಅಭಯಾರಣ್ಯಕ್ಕೆ ಆಗಮಿಸಿದ್ದ ಸಚಿನ್, ಸಿಬ್ಬಂದಿ ವರ್ಗದವರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು ಎಂದು ಸ್ಥಳೀಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಕಳೆದ ಆಗಸ್ಟ್​ನಲ್ಲಿ ಸಚಿನ್​ ಅವರನ್ನು ಅರಣ್ಯ ಸಚಿವ ಸುಧೀರ್ ಮುಂಗಾಟ್ನಿವಾರ್ ಮಹಾರಾಷ್ಟ್ರದ ಹುಲಿ ರಾಯಭಾರಿಯಾಗಲು ಆಹ್ವಾನಿಸಿದ್ದರು. ಇದಕ್ಕೆ ಸಚಿನ್ ತೆಂಡುಲ್ಕರ್ ಸಮ್ಮತಿ ಸೂಚಿಸಿದ್ದರು.

Viewed 43 times
  • SHARE THIS
  • TWEET THIS
  • SHARE THIS
  • E-mail

Press Releases

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1